ಮಹದೇಶ್ವರರ ಪುಣ್ಯ ಕ್ಷೇತ್ರಗಳ ಪರಿಚಯ

ಕೋಡುಗಲ್ಲು ಮಹದೇಶ್ವರ ಸನ್ನಿಧಿ:

ಇದು ಶ್ರೀಮಲೆ ಮಹದೇಶ್ವರ ದೇವಾಲಯದಿಂದ ೪ಕಿ.ಮೀ ದೂರದಲ್ಲಿದೆ. ಈ ಸ್ಥಳವು ಶ್ರೀಮಲೆ ಮಹದೇಶ್ವರ ಸ್ವಾಮಿಯವರ ಪವಾಡದಲ್ಲಿ ಒಂದಾಗಿದೆ.
ಈ ಸ್ಥಳದ ಮಹಿಮೆ ಅಂದು ಬೇಡರ ಕುಲದಲ್ಲಿನ ಹೆಣ್ಣು ಮಗಳೊಬ್ಬಳು ತಮ್ಮ ಬಂಗಾರದ ಬಳೆಯನ್ನು ಕಳೆದುಕೊಂಡು ಹುಡುಕಿ ಸಿಗದೆ ದುಃಖದಲ್ಲಿ ಮಹದೇಶ್ವರರನ್ನು ಬೇಡಿಕೊಂಡರು ಈ ಮಹಿಳೆಯ ಭಕ್ತಿಗೆ ಮೆಚ್ಚಿದ ಮಹದೇಶ್ವರರು ಬಂಗಾರದ ಬಳೆ ಹುಡುಕಲು ಕಲ್ಲುಗಳನ್ನುಬೆಟ್ಟದ ಮೇಲೆ ಜೋಡಿಸಿ ಕೋಡಿನಮೇಲೆ ನಿಂತು ಹುಡುಕಿದಾಗ ಅದು ಸಿಗದೇ ಹೋದಾಗ ಆ ಸ್ಥಳವು ಬಳೆಕಲ್ಲು ಬಸವೇಶ್ವರ ಎಂದು ಖ್ಯಾತಿ ಹೊಂದಲಿ ಎಂದು ವರವನ್ನು ನೀಡಿ ಮಹಿಳೆಗೆ ಅದರ ಮಹತ್ವ ತಿಳಿಸಿಕೊಟ್ಟರು. 
Kodagallu

ಹಾಗೂ ಇನ್ನೊಂದು ಕಥೆಯೆನೆಂದರೆ ಮಹದೇಶ್ವರರು ಬಾಲಕರೊಂದಿಗೆ ಈ ಕಾಡು ಪ್ರದೇಶದಲ್ಲಿ ಗೋಲಿ, ಗಜ್ಜುಗದ ಆಟವಾಡುತ್ತ ,ನಂತರ ಈ ಪ್ರದೇಶದಲ್ಲಿ ಲಾಗೋರಿ ಆಟವಾಡುತ್ತಿದರು, ಲಾಗೋರಿಆಟವಾಡಲು ಇಲ್ಲಿ ಈ ೨ಕೋಡುಗಳುವುಳ್ಳ ಕಲ್ಲುಗಳನ್ನು ಜೋಡಿಸಿದರು ಎಂದು ಹಾಡುಮಾತುಗಳಿಂದ ತಿಳಿದು ಬಂದಿದೆ. ಮತ್ತು ಈ ಕೋಡುಗಲ್ಲು  ಮಳೆಗಾಳಿ ಬಂದರು ಏನು ಆಗದೇ ಇರುವುದು ವಿಸ್ಮಯಕಾರಿಯಾಗಿದೆ.ಈ ಸ್ಥಳವು ಕೋಡುಗಲ್ಲು ಮುನಿಶ್ವರ ,ಕೋಡುಗಲ್ಲು ಮಹದೇಶ್ವರ ಎಂದು ಕರೆಯಲ್ಪಡುತ್ತದೆ.

ಪಾದಧಾರೆ ಮಹದೇಶ್ವರ ಸನ್ನಿಧಿ: 

ಈ ಕ್ಷೇತ್ರವು  ಮಲೆ ಮಹದೇಶ್ವರ ಬೆಟ್ಟದಿಂದ ೧೮ ಕಿ.ಮೀ,ದೂರದಲ್ಲಿದ್ದು. ಈ ಕ್ಷೇತ್ರವು  ದಟ್ಟರಾಣ್ಯಗಳ ನಡುವೆ ಕಂಗೋಳಿಸುತ್ತದೆ. ಈ ಸ್ಥಳದ ಮಹಿಮೆ ಅಂದು  ಮಹದೇಶ್ವರರು ತಪಸಾರೆಯ ಬೆಟ್ಟದಲ್ಲಿ ತಪ್ಪೋನಿರತರಾಗುವ ಮುನ್ನ  ಮಹದೇಶ್ವರ ವಾಹನವಾದ ವ್ಯಾಘ್ರವು ಹಸಿವಿನಿಂದ ಆಹಾರ ಬೇಡಿಕೊಂಡಾಗ ೧೦೦ ಹಸುವುಳ್ಳ ಶ್ರೀಮಂತ ವ್ಯಕ್ತಿಯ ಹಸುವಲ್ಲಿ ಒಂದು ಹಸುವನ್ನು ಆಹಾರವಾಗಿ ಸ್ವೀಕರಿಸಲು ತಿಳಿಸಿ ತಪಸ್ಸಿನಲ್ಲಿ ತೊಡಗಿದರು. ಆ ಸಮಯದಲ್ಲಿ ಮಹದೇವನ ಭಕ್ತನೊಬ್ಬ ಕಡುಬಡವನಾಗಿದ್ದು ೩ ಹಸುಗಳನ್ನು ಮಾತ್ರ ಹೊಂದಿದ್ದು. ಕಾಡಿನಲ್ಲಿ ಹಸು ಮೇಯಲು ಬಿಟ್ಟು ನಿದ್ರೆಗೆ ಜಾರಿದ ಸಮಯದಲ್ಲಿ ವ್ಯಾಘ್ರವು ಬಡವನ ಹಸುವಿನ ಅಂದಚೆಂದ ಕಂಡು ಅದನ್ನು ಕೊಂದು ತಿಂದಿತ್ತು, ಆ ಸಂದರ್ಭದಲ್ಲಿ ಬಡವನು ನಿದ್ರೆಯಿಂದ ಎಚ್ಚರಗೊಂಡಾಗ ತನ್ನ ಹಸು ಸತ್ತಿರುವ ದೃಶ್ಯ ಕಂಡು ದುಃಖದಿಂದ ಗೋಳಾಡುತ್ತ ಮಹದೇಶ್ವರರನ್ನು ಬೇಡಿಕೊಳ್ಳುತ್ತಾನೆ. ಇವನ ಈ ದುಃಖದ ಕೂಗು ಕೇಳಿದ ಮಹದೇಶ್ವರರು ಬರುವ ದಾರಿಯಲ್ಲಿ ಹುಲಿಯು ಹಸುವನ್ನು ತಿಂದ ಬಳಿಕ ಕಾಡಿನಲ್ಲಿದ್ದ ಕರಡಿಯ ಜೊತೆ ಜೂಜಾಡುತ್ತಿತ್ತು.  ಇದನ್ನು ಕಂಡ ಮಹದೇಶ್ವರರು, ಹುಲಿಯನ್ನು ೧೦೦ ಹಸುಗಳ ಗುಂಪಲ್ಲಿ ಒಂದು ಹಸುವನ್ನು ತಿನ್ನಲು ತಿಳಿಸಿದೆ ಆದರೆ ನೀನು ೩ ಹಸು ವಿದ್ದ ಬಡವನ ಒಂದು ಹಸುವನ್ನು ತಿಂದೆ ಎಂದು ಕೊಪದಿಂದ ಹುಲಿಯನ್ನ ಮರಕ್ಕೆ ಕಟ್ಟಿಹಾಕಿ ಗುಂಜಿ ಗುಂಜಿ ಹೊಡೆದು ಬಿಸಾಡಿದರು. ಆ ಕ್ಷಣದಲ್ಲಿ ಹುಲಿಯು ಹುತ್ತ ವಾಯಿತು. ಇದನ್ನು ಕಂಡ ಕರಡಿಯು ಭಯ ದಿಂದ ಕಲ್ಲಾಯಿತು. ಈ ಕ್ಷೇತ್ರವನ್ನು ಗುಂಜು ಮಲೆ ಯಂದು ಸಹ ಕರೆಯಲಾಗುತ್ತದೆ. 
Padadare



ತಪಸಾರೆ: 

ಈ ಕ್ಷೇತ್ರವು  ಮಲೆ ಮಹದೇಶ್ವರ ಬೆಟ್ಟದಿಂದ ೧೨ ಕಿ.ಮೀ,ದೂರದಲ್ಲಿದ್ದು. ಈ ಕ್ಷೇತ್ರವು  ದಟ್ಟರಾಣ್ಯಗಳಿಂದ ಕೂಡಿದು,  ತೇಗ,ಹೊನ್ನೆ,ಮರಗಳನಡುವೆ ಸುಂದರವಾದ ಮನಮೋಹಕವಾದ ಎತ್ತರದ ಬೆಟ್ಟಗಳಲ್ಲಿ ರಂಜಿಸುವ ಪೂಣ್ಯ ಭೂಮಿಯಾಗಿದೆ.ಅಂದು ದೇವನು ದೇವತೆಗಳು ಶ್ರವಣಾಸುರನ ಬಂಧನದಲ್ಲಿ ಬಂಧಿಗಳಾಗಿರುವ ಸಮಯದಲ್ಲಿ ದೇವತೆಗಳನ್ನು ಬಂಧಮುಕ್ತಾಗೋಳಿಸಲು ಹಾಗೂ ಶ್ರವಣನ ಸಂಹರಮಾಡುವ ನಿಟ್ಟಿನಲ್ಲಿ ಮಹದೇಶ್ವರರು ೩ಸೂಜಿಮಣೆಯ ಮೇಲೆ ನಿಂಬೆಹಣ್ಣುಇರಿಸಿ ಅದರ ಮೇಲೆ ಕುಳಿತು ,ತಪಸ್ಸು ಮಾಡಿದ ಸ್ಥಳವಾಗಿದೆ. ಈ ತಪೋ ಭೂಮಿಯಲ್ಲಿ ಶ್ರವಣಾಸುರನ ಸಂಹಾರಕ್ಕೆ ಬೇಕಾದ ಯೋಜನೆ ದೊರೆಯುತ್ತದೆ. 


ಆಲಂಬಾಡಿ:

ಈ ಪ್ರದೇಶವು ಪಾಳೇಗಾರ ಅಳ್ವಿಕೆಯಾಗಿದು,ಜೂಂಜೆಗೌಡರು ಅಂದಿನ ದಿನಗಳಲ್ಲಿ ಆಲಂಬಾಡಿ ಪ್ರಾಂತ್ಯದ ಪ್ರಮುಖ ಪಾಳೇಗಾರನಾಗಿದು,ಮಹದೇಶ್ವರಸ್ವಾಮಿಯ ಭಕ್ತನಾಗಿ ಮಹದೇಶ್ವರರ ಗುಡಿಯನ್ನು ನಿರ್ಮಿಸಿದವನಿರುತ್ತಾನೆ. ಇತ ಮೊದಲಿಗೆ ಶ್ರೀವೆಂಕಟೇಶ್ವರ ಲಕ್ಷೀದೇವಿಯ ಆರಾಧಕನಾಗಿದು,ಬಹಳಅಹಂಕಾರಿಯಾಗಿರುತ್ತಾನೆ,ಇವನ  ಶಿವಭಕ್ತರನ್ನು ತುಂಬಾ ಹಿನಾಯವಾಗಿ ಕಾಣುತ್ತಿದನು. ಆದರೆ ಇತನ ದೊಡ್ಡಿಯಲ್ಲಿ ಹಲವು ಗೋವುಗಳು ಇದ್ದು. ಇದರಲ್ಲಿ ಒಂದು ಹಸು ಶಿವಸ್ವರೂಪಿ ಮಹದೇಶ್ವರರ ನಡುಮಲೆಯ ಗಿರಿಗೆ ಬಂದು ಪ್ರತಿದಿನ ಹಾಲಿನ ೭ ಊತದ ನಡುವಿನ ಕೊಕ್ಕೆಮುಳ್ಳು ಪೊದೆಯಲ್ಲಿನ ಲಿಂಗಕ್ಕೆ ಮಜ್ಜನ ಮಾಡಿ ಹೋಗುತ್ತಿತು, ಆದರೆ ದೊಡ್ದಿಯಲ್ಲಿ ಹಾಲು ಕರೆಯಲು ಧನಗಾವಲುಗಾರ ಬಂದಾಗ ಹಾಲಿನ ಬದಲು ರಕ್ತ ಕರೆಯುತ್ತಿತು.ಇದನ್ನು ಗಮನಿಸಿದ ಧನಗಾಯಿ ಯಜಮಾನನಾದ ಜೂಂಜೆಗೌಡನಿಗೆ ತಿಳಿಸಿದನು, ಪ್ರತಿದಿನ ಈ ರೀತಿಆಗುವುದನ್ನು ತಿಳಿದ ಜೂಂಜೆಗೌಡ ಹಸುವನ್ನು ಹಿಂಬಾಲಿಸಿ ಹೊರಟನು ಆ ಹಸು ದೊಡ್ಡಿಯಿಂದ ನಡುಮಲೆಯ ಬೆಟ್ಟದಲ್ಲಿ ಲಿಂಗಕ್ಕೆ ಹಾಲು ನೀಡುತ್ತಿತು ಇದನ್ನು ಗಮನಿಸದೆ ಹಸುವನ್ನು ಓಡೆಯ ಹೋದಾಗ ಹಸು ಮುಂದೆಸಾಗಿತ್ತು, ಆಗ ಅಲ್ಲಿ ಲಿಂಗಕಂಡು ಕ್ಷಮೆಯಾಚಿಸಿ, ಮಾಡಿದ ತಪ್ಪಿಗೆ ಗುಡಿನಿರ್ಮಿಸಲು ಮುಂದಾದರು. ಆಗ ಲಿಂಗದ ಸುತ್ತಲು ಕೊಕ್ಕೆ ಮುಳ್ಳಿನ ಪೊದೆ ಇದ್ದು ಇದನ್ನು ಕತ್ತರಿಸುವಾಗ ಲಿಂಗಕ್ಕೆ ಮಚ್ಚಿನ ಪೆಟ್ಟು ತಗಲಿ ಲಿಂಗ ದಿಂದ ರಕ್ತ್ ಹೊರ ಚೆಲ್ಲಿತು. ಇದರ ಗುರುತು ಈಗಲು ಇದೆ. ಅಂದಿನಿಂದ ೭ ಅಂಕಣದ ಗುಡಿಯನ್ನು ನಿರ್ಮಿಸಿ ಪೂಜಿಸುತ್ತ ಬಂದರು. ಆದರೆ ಇವರಲ್ಲಿ ಅಹಂಕಾರದ ಗುಣ ವಿದ್ದ ಕಾರಣ, ಮಹದೇಶ್ವರ ಗುಡಿಯ ನಿರ್ಮಾಣದ ನಂತರ ನಂದಿಯನ್ನು (ಆಲಂಬಾಡಿ ಬಸವ/ದೊಡ್ಡ ಬಸವ) ನಿರ್ಮಿಸಿ ಅದರ ಕೆಳಭಾಗದಲ್ಲಿ ಆಲಂಬಾಡಿ ಜುಂಜೆಗೌಡನ ಕೊಡುಗೆ ಎಂಬುದಾಗಿ ನಾಮ ಫಲಕ ಹಾಕಿದನು. ಇದರಿಂದ ಅವನ ಅಹಂಕಾರ ಮತ್ತು ಹಣದ ವ್ಯಾಮೊಹವನ್ನು ತೊಡೆಯಲು ಮಹದೇಶ್ವರರು ದೊಡ್ಡ ಬಸವನನ್ನು ಆಲಂಬಾಡಿ ದಿಕ್ಕಿಗೆ ಮುಖ ಮಾಡುವಂತೆ ಶಾಪ ನೀಡಿದರು. ಇದರ ಅರಿವಿಲ್ಲದೆ,ಆಲಂಬಾಡಿ ಜೂಂಜೆಗೌಡ ಮತ್ತೆ ಮಹದೇಶ್ವರ ದೇವಾಲಯದೆಡೆಗೆ ಮುಖ ನಿರ್ಮಾಣ ಮಾಡಿದನು. ಆದರು ಪ್ರತಿ ಬಾರಿಯು ಬಸವನ ಮುಖ ಆಲಂಬಾಡಿಯ ಕಡೆಗೆ ತಿರುಗುತ್ತಿತ್ತು. ಇದನ್ನು ಗಮನಿಸಿದ ಜುಂಜೇಗೌಡ ಆಶ್ಚರ್ಯದಿಂದ ಮಹದೇಶ್ವರರ ಬಳಿ ಬಂದು ಕೇಳಿದಾಗ ಬಸವ ಮೂರ್ತಿಗೆ ಜುಂಜೇಗೌಡನ ಕೊಡುಗೆಯ ನಾಮ ಫಲಕ ಹಾಕಿರುವ ಬಗ್ಗೆ ತಿಳಿಸಿ, ಹಣ ಅಧಿಕಾರ ಯಜಮಾನಿಕೆ ಎಂಬುವುದು ಯಾರ ಸ್ವತ್ತು ಅಲ್ಲ, ನಾನು ನನ್ನಿಂದ ನಾನು ಕೊಟ್ಟಿದ್ದು ಎಂಬುದನು ಫಲಕ ಹಾಕುವವರ ಕಾಣಿಕೆ ನನಗೆ ಬೇಡ ಹಾಗಾಗಿ ಆ ಬಸವ ನಿನ್ನ ಆಲಂಬಾಡಿಯತ್ತಲೆ ನೋಡಲಿ ಎಂಬುದಾಗಿ ಶಾಪ ನೀಡಿರುವುದಾಗಿ ತಿಳಿಸಿದರು. ಜುಂಜೇಗೌಡನಿಗೆ ಇದರ ತಪ್ಪಿನ ಅರಿವಾಗಿ ನಾಮಫಲಕ ತೆಗೆದುಹಾಕಿ ಮಹದೇಶ್ವರರ ಭಕ್ತನಾಗಿ ಮುಂದುವರಿದರು.

Alambadi Basaveshawara

ಜುಂಜೆಗೌಡರ ಕುಟುಂಬದಲ್ಲಿ ೭ಜನ ಗಂಡು ಮಕ್ಕಳು ಮತ್ತು ೭ ಜನ ಸೊಸೆಯರು ಇರುತ್ತಾರೆ. ಇವರಲ್ಲಿ ಸೌಂದರ್ಯವತಿಯಾದ ಕೊನೆಯ ಸೊಸೆಯು  ಪ್ರತಿದಿನ ಕಾವೇರಿ ನದಿಯಿಂದ ನೀರು ತರಲು ಹೋಗುತ್ತಿರುವಾಗ ಅದೇ ದಾರಿಯಲ್ಲಿ ವಾಸವಾಗಿರುವ ವಿಶ್ವಕರ್ಮ ಕುಲದ ಶಿಲ್ಪಿಯ ಮುಖವನ್ನು ನೋಡಿ ಹೋಗುತ್ತಿದ್ದಳು. ಹೀಗೆ ಕಾಲ ಕಳೆದಂತೆ  ಇವಳು ಗರ್ಭಾವತಿಯಾಗಿ  ನವ ಮಾಸ ತುಂಬಿದ ನಂತರ ಒಂದು ಅಚ್ಚರಿ ನಡೆದಿತ್ತು. ಅದು ಏನೆಂದರೆ ಆಕೆಗೆ ಹುಟ್ಟಿದ ಮಗು ವಿಶ್ವಕರ್ಮ ಕುಲದ ಶಿಲ್ಪಿಯ ಮುಖವನ್ನು ಹೋಲುತ್ತಿತ್ತು. ಇದನ್ನು ಗಮನಿಸಿದ ಜುಂಜೇಗೌಡನು ಸೊಸೆಯ ಜೊತೆ ವಿಶ್ವಕರ್ಮನ ಅಕ್ರಮ ಸಂಬಂಧ ಇದೆ ಎಂದು ಅನುಮಾನಗೊಂಡು ಕೋಪಗ್ರಸ್ತನಾಗಿ ಶಿಲ್ಪಿಯನ್ನು ಶಿಕ್ಷೆಗೆ ಗುರಿಪಡಿಸುತ್ತಾನೆ. ಇದನ್ನು ಕೇಳಿ ಮನನೊಂದ  ಶಿಲ್ಪಿಯು ತಾನು ನಿರಾಪರಾದಿ ಎಂದು ಸಾಬೀತುಪಡಿಸಲು ಒಂದು ವರ್ಷ ಸಮಯಾವಕಾಶ ಕೊಡಿ ಎಂದು ಕೇಳಿಕೊಂಡನು. ಇದಕ್ಕೆ ಜುಂಜೇಗೌಡನು ಒಪ್ಪಿ ಅನುಮತಿ ನೀಡಿದನು.

ಒಂದು ವರ್ಷ ಕಾಲಾವಕಾಶ ಪಡೆದ ಆ ಶಿಲ್ಪಿ ಆಲೋಚಿಸಿ ಕಾವೇರಿ ನದಿಯ ಮಧ್ಯೆ ನಂದಿ ಬಸವನನ್ನು ನಿರ್ಮಿಸುತ್ತಾನೆ. ಪ್ರತಿ ನಿತ್ಯ ಗೋವುಗಳು ನೀರುಕುಡಿಯಲು ಕಾವೇರಿ ನದಿ ತೀರಕ್ಕೆ ಬಂದು ನಂದಿ ವಿಗ್ರಹವನ್ನು ನೋಡಿ ಹೋಗುತ್ತಿದ್ದವು. ಹೀಗೆ ದಿನ ಕಳೆದಂತೆ ನದಿಯ ತೀರಕ್ಕೆ ನೀರು ಕುಡಿಯಲು ಬರುತ್ತಿದ್ದ ಗೋವುಗಳು ಜನ್ಮ ನೀಡಿದ ಎಲ್ಲಾ ಕರುಗಳು  ನಂದಿ ವಿಗ್ರಹ ರೂಪವನ್ನು ಹೋಲುವಂತೆ ಕಾಣುತ್ತಿದ್ದವು. ಅಷ್ಟರಲ್ಲಿ ಒಂದು ವರ್ಷ ಕಾಲಾವಕಾಶ ಕೇಳಿದ್ದ ಶಿಲ್ಪಿಯು ಪಾಳೇಗಾರರನ್ನು ಕರುಗಳ ಬಳಿ ಕರೆತಂದು ಎಲ್ಲಾ ಕರುಗಳು ನಂದಿ ವಿಗ್ರಹವನ್ನು ಹೋಲುತ್ತಿರುವ ಕಾರಣವನ್ನು ವಿವರಿಸಿದನು. ಇದನ್ನು ನೋಡಿದ ಜುಂಜೇಗೌಡನಿಗೆ ಇದ್ದ ಅನುಮಾನ ದೂರವಾಯಿತು. ಶಿಲ್ಪಿಯು ನಿರ್ಮಿಸಿದ ನಂದಿ ವಿಗ್ರಹಕ್ಕೆ ಆಲಂಬಾಡಿ ಹೊಳೆ ಬಸವ ಎಂದು ಹೆಸರಾಯಿತು. ಇದರ ವಿಶೇಷೇಶತೆ ಏನೆಂದರೆ ಹೊಳೆಯಲ್ಲಿ ಎಷ್ಟೇ ಪ್ರವಾಹ ಬಂದರು ನಂದಿ ಮೂರ್ತಿಯು ಕೊಚ್ಚಿಹೋಗುವುದಿಲ್ಲ. 




ಆಲಂಬಾಡಿ ಗ್ರಾಮದಲ್ಲಿ ಜುಂಜೇಗೌಡನ ಕೋಟೆ, ಮದ್ದು ಗುಂಡುಗಳನ್ನು ಶೇಖರಿಸಿ ಇಡಲಗುತ್ತಿದ್ದ ಮದ್ದಿನ ಮನೆ ಮತ್ತು ರಂಗನಾಥ ದೇವಾಲಯವನ್ನು ಈಗಲೂ ಕಾಣಬಹುದು.

#mmhills #malemahadeshwara