ಮಹದೇಶ್ವರರ ಜನನ

ಸುಮಾರು ೯೦೦ ವರ್ಷಗಳ ಹಿಂದೆ (೧೧ ನೇ ಶತಾಮಾನ) ದಿದಿಂಬಿ ಎಂಬ ರಾಕ್ಷಸಿಯು ಬ್ರಹ್ಮದೇವನ ಕುರಿತು ಘೊರ ತಪಸ್ಸನ್ನು ಮಾಡಿ ತನಗೆ ಜನಿಸುವ ಶಿಶುವು ಬ್ರಹ್ಮಾಂಡದಲ್ಲಿ ಬ್ರಹ್ಮದೇವನಿಂದ ಸೃಷ್ಟಿಗೊಂಡ ಯಾವ ಜೀವಿ ಯಿಂದಾಗಲಿ, ಸುರ-ಅಸುರರಿಂದಾಗಲಿ ಮರಣಬಾರದಂತೆ ಬೇಡಿಕೊಂಡರು. ಬ್ರಹ್ಮದೇವನು ದಿದಿಂಬಿಗೆ ಬೇಡಿದ ವರವನ್ನು ಅನುಗ್ರಹಿಸಿ ಆಶೀರ್ವದಿಸಿದರು. ಅದರಂತೆ ಅಮಾವಾಸ್ಯೆಯ ದಿನದಂದು ಶ್ರವಣ ಅಸುರನ ಜನನ ಉಂಟಾಯಿತು. ಬಾಲಕನಾಗಿದ್ದಾಗಲೇ ಶ್ರವಣಾಸುರ ಭೂಮಂಡಲದ ಸಾಧು-ಸಂತರು, ಶಿವ ಭಕ್ತರನ್ನು ಹಿಂಸಿಸತೊಡಗಿದನು. ಇಡೀ ಪ್ರಪಂಚವೇ ತನ್ನವಶದಲ್ಲಿ ಇರಬೇಕು, ದೇವ ಅಸುರರ ಮೇಲೆ ತನ್ನದೇ ಅಧಿಕಾರ ಹೊಂದಬೇಕು ಎಂಬ ಮಹಾದಾಸೆಯಿಂದ ಶ್ರವಣಸುರನು ದೇವಾನು ದೇವತೆಗಳನ್ನು ಬಂಧಿಸಿ, ಸಾಧು-ಸಂತರನ್ನ ಕೊಲ್ಲುವ ವಿಕ್ರುತ ಪರಿಗೆ ಹೊರಟನು.

ಬ್ರಹ್ಮದೇವನ ವರದಾನದಿಂದ ಜನಿಸಿದ ಶ್ರವಣಾಸುರ ಮಾಡುತ್ತಿರುವ ಹಿಂಸೆಯಿಂದ ನೊಂದ ಸಾಧು ಸಂತರು ಹಾಗು ದೇವಾನು ದೇವತೆಗಳು ಮಹಾಶಿವನನ್ನು ಬೇಡಿಕೊಂಡರು.  ಇದರಿಂದ ಮುಕ್ತಿ ನೀಡುವಂತೆ ಕೇಳಿಕೊಂಡಾಗ, ಶಿವನು ಶ್ರವಣಾಸುರನ ಪಾಪದ ಕೊಡ ತುಂಬಿದಾಗ ಮರಿದೇವ ನೆಂಬ ನಾಮಾಂಕಿತದಿಂದ ಶಿವಶರಣ ದಂಪತಿಗಳ ಮಗನಾಗಿ ಜನಿಸಿ ಸಂರಕ್ಷಣೆ ಮಾಡುವುದಾಗಿ ಅಭಯ ನೀಡಿದನು.

ಕಾಲ ಕಳೆದಂತೆ ಶ್ರಾವಣಸುರನ ಪಾಪದ ಕೊಡವು ತುಂಬಿತು. ಮಹಾಶಿವನು ಸಾಧು-ಸಂತರಿಗೆ ನೀಡಿದ ಆಭಯದಂತೆ ಭೂಮಿಯಲ್ಲಿ ಜನ್ಮತಾಳುವಂತೆ ಯೋಚಿಸಿದರು. 

ಆಂಧ್ರ ಪ್ರದೇಶದ ಶ್ರೀಶೈಲ ಪ್ರಾಂತ್ಯದಲ್ಲಿ ಉತ್ತರಾಜಮ್ಮ ಮತ್ತು ಚಂದ್ರಶೇಖರಮೂರ್ತಿ ಎಂಬ ಶರಣ ದಂಪತಿಗಳಿಬ್ಬರು ಸಂತಾನಭಾಗ್ಯಕ್ಕಾಗಿ ಪ್ರತಿನಿತ್ಯ ಶಿವನ ಆರಾಧನೆ ಮಾಡುತಿದ್ದರು. ಉತ್ತರಾಜಮ್ಮ ಪರಶಿವನ ಮಹಾ ಭಕ್ತೆಯಾಗಿದ್ದು ಬಂಜೆಯೆಂಬ ಮಾತಿಗೆ ಸಿಲುಕಿ ತುಂಬಾ ನೋವು ಸಂಕಟದಿಂದ ಜೀವಿಸುತಿದ್ದಳು. ಇದನ್ನು ಅರಿತ ಮಹಾಶಿವನು ಉತ್ತರಾಜಮ್ಮಳಿಗೆ ಒಂದು ದಿನ ಸಾಧುವಿನ ರೂಪದಲ್ಲಿ ಕಾಣಿಸಿಕೊಂಡು ಶಿವ ದೇವಾಲಯದಲ್ಲಿ ಶ್ರದ್ದೆ ಭಕ್ತಿಯಿಂದ ದೇವಾಲಯ ಸುಚಿತ್ವಗೊಳಿಸಿ ಆ ರಾತ್ರಿ ಅಲ್ಲಿಯೆ ಉಳಿಯುವಂತೆ ತಿಳಿಸಿದರು. ಅದರಂತೆ ಸೋಮವಾರ ಮಹಾಶಿವರಾತ್ರಿಯಂದು ದಂಪತಿಗಳು ನಿಯಮಾನುಸಾರ ಶಿವ ದೇವಾಲಯದಲ್ಲಿ ಸುಚಿತ್ವ ಮಡಿಯೊಂದಿಗೆ ಶಿವಪೂಜೆ ಮಾಡಿ ದಿವ್ಯ ಜ್ಯೊತಿಗಳನ್ನು ಹಚ್ಚಿ ಆ ರಾತ್ರಿ ದೇವಾಲಯದ ಆವರಣದಲ್ಲಿ ವಿಶ್ರಾಂತಿ ಪಡೆದರು. ವಿಶ್ರಾಂತಿ ಪಡೆಯುವ ವೇಳೆ ನಿದ್ರೆಗೆ ಜಾರಿದರು. ಉತ್ತರಾಜಮ್ಮನ ಕನಸಿನಲ್ಲಿ ಶಿವನು ಬಂದು ಗರ್ಭಗುಡಿಯಲ್ಲಿ ಜ್ಯೋತಿಯ ರೂಪದಲ್ಲಿ ನಿಂತು ಮಾತನಾಡಿ, ನಾನು ನಿನ್ನ ಆರಾಧ್ಯ ದೈವ ಮಹಾಶಿವ, ನಾನು ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ಮಗು ಬೇಕು ಎಂದು ಬೇಡುತ್ತಿರುವ ನಿನಗೆ ನಾನೇ ಮಗನಾಗಿ ಜನಿಸಿಬರುತ್ತೇನೆ, ಆದರೆ ನಾನು ಎಲ್ಲರಂತೆ ಜನನಾಂಗ ಮಾರ್ಗದ ಮೂಲಕ ಜನಿಸುವುದಿಲ್ಲ ಅದಕ್ಕೆ ಬದಲಾಗಿ ಬೆನ್ನಿನಲ್ಲಿ ಹುಟ್ಟಿ ಬರುತ್ತೇನೆ ಹಾಗೂ ತಾಯಿಯ ಎದೆಯ ಹಾಲನ್ನು ಕುಡಿಯುವುದಿಲ್ಲ. ಒಂದು ಮಹಾತ್ಕಾರ್ಯಕ್ಕಾಗಿ ಜನಿಸುತ್ತಿರುವ ನಾನು ಹೆಚ್ಚು ದಿನಗಳ ಕಾಲ ನಿನ್ನ ಜೊತೆ ಇರುವುದಿಲ್ಲ ಎಂದು ಹೇಳಿ ದಿವ್ಯ ಜ್ಯೋತಿಯು ಅಲ್ಲಿಂದ ಮರೆಯಾಯಿತು. ನಿದ್ರೆಯಿಂದ ಎಚ್ಚೆತ್ತ ಉತ್ತರಾಜಮ್ಮನು ಕನಸಿನಲ್ಲಿ ನಡೆದ ಘಟನೆಯನ್ನು ತನ್ನ ಪತಿಯ ಜೊತೆ ಹೇಳಿಕೊಂಡರು.

ಈ ರೀತಿಯಾದ ಕೆಲವು ದಿನಗಳ ಬಳಿಕ ಉತ್ತರಾಜಮ್ಮನು ನೀರು ತರಲು ಕೊಳಕ್ಕೆ ಹೋದಳು. ಅಲ್ಲಿ ಮಹಾಶಿವನು ಹೊನ್ನೆ ದುಂಬಿಯ ರೂಪದಲ್ಲಿ ಕೆಂದಾವರೆ ಹೂವಿನ ಮೇಲೆ ಕುಳಿತಿದ್ದರು. ಸುಂದರವಾಗಿ ಕಾಣುತ್ತಿದ್ದ ಕೆಂದಾವರೆಯನ್ನು ಕಂಡು ಉತ್ತರಾಜಮ್ಮ ಆಸೆಯಿಂದ ಅದರ ಬಳಿ ಹೋಗಿ ಹೂವನ್ನು ಕೈಯಿಂದ ಹಿಡಿದು ಅದರ ಸುಗಂಧವನ್ನು ಸವಿಯುವ ಸಂಧರ್ಭದಲ್ಲಿ ಹೊನ್ನೆದುಂಬಿಯ ರೂಪದಲ್ಲಿ ಇದ್ದ ಶಿವನು ಮೂಗಿನ ಮೂಲಕ ದೇಹ ಪ್ರವೇಶಿಸಿ ಉತ್ತರಾಜಮ್ಮನ ಗರ್ಭದಲ್ಲಿ ಸೇರಿಕೊಂಡು ಶಿವನ ಅಪ್ಪಣೆಯಂತೆ ಉತ್ತರಾಜಮ್ಮ ಗರ್ಭವತಿಯಾದಳು. ಉತ್ತರಾಜಮ್ಮನಿಗೆ ನವ ಮಾಸ ತುಂಬಿದಂತೆ ಮಗುವಿಗೆ ಜನ್ಮ ನೀಡಿದಳು. ಈ ಮಗು ಉತ್ತರಾಜಮ್ಮನ ಬೆನ್ನಿನ ಮಚ್ಚೆಯ ಮೂಲಕ  ಹೊರಬಂದಿತು. ಮಗು ಜನಿಸುವ ಸಂಧರ್ಭದಲ್ಲಿ ತಾಯಿಗೆ ಯಾವುದೇ ನೋವು ಕಾಣಿಸಿಕೊಳ್ಳಲಿಲ್ಲ.

ಮಗು ಹುಟ್ಟಿದ ನಂತರ ನಾಮಕರಣ ಮಾಡಿಸಲು ಉತ್ತರಾಜಮ್ಮ ದಂಪತಿಗಳು ವ್ಯಾಘ್ರಾನಂದ ಮಹರ್ಷಿಯ ಆಶ್ರಮಕ್ಕೆ ಬಂದರು. ವ್ಯಾಘ್ರಾನಂದ ಮಹರ್ಷಿಗಳ ರೂಪ ಮಾನವ ಮತ್ತು  ಹುಲಿ ಸೇರಿಕೊಂಡಂತ್ತಿತ್ತು, ಮುಖ ಹಾಗು ಕೈಗಳು ಮನುಷ್ಯನ ರೂಪದಲ್ಲಿ ಇದ್ದು ದೇಹ ಮತ್ತು ಕಾಲುಗಳು ಹುಲಿಯ ರೂಪವಿತ್ತು. ತ್ರಿಕಾಲ ಜ್ಞಾನಿಗಳಾಗಿದ್ದ ಇವರಿಗೆ ಮುಂದೆ ನಡೆಯುವ ಘಟನೆ ಮುಂಚಿತವಾಗಿ ತಿಳಿಯುತ್ತಿದ್ದವು. ಮಗುವನ್ನು ನೋಡಿದ ಮಹರ್ಷಿಯು ಆ ಮಗುವಿನ ತೇಜಸ್ಸನ್ನು ಕಂಡು ಇದು ಸಾಮಾನ್ಯವಾದ ಮಗು ಅಲ್ಲ ಮುಂದೊಂದು ದಿನ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದು ಕೀರ್ತಿ ಸಂಪಾದಿಸುತ್ತಾನೆ ಎಂದು ಹೇಳಿದರು. ಇವನಿಗೆ ಈಗಲೆ ಹೆಸರಿಡಲು ಸಾದ್ಯವಿಲ್ಲ, ಸದ್ಯಕ್ಕೆ ಮರಿದೇವ ಎಂದು ಹೆಸರಿಡುತ್ತೇನೆ ಎಂದು ನಾಮಕರಣ ಮಾಡಿದರು.

ಕೆಲವು ವರ್ಷಗಳು ಕಳೆದಂತೆ ಬಾಲಚ್ಯೆತನ್ಯರೂಪನಾದ ಮರಿದೇವನು ವ್ಯಾಘ್ರನಂದರ ಬಳಿ ವಿಧ್ಯಾಭ್ಯಾಸಕ್ಕಾಗಿ ಬಂದು ಸೇರಿಕೊಂಡರು. ಶಾಲೆಯಲ್ಲಿ ಮಕ್ಕಳೊಂದಿಗೆ ಆಟವಾಡುವಾಗ ಕಾಡಿನ ಒಳಗೆ ಹೋಗಿ ಕಾಡು ಪ್ರಾಣಿಗಳಾದ ಹಾವು ಹಾಗು ಹುಲಿ ಮರಿಗಳ ಜೊತೆ ಗುರುಕುಲಕ್ಕೆ ಬರುತ್ತಿರುವುದನ್ನು ಗುರುಗಳು ಒಂದುದಿನ ನೋಡಿದರು. ಬಾಲಕನ ಬಾಲಲೀಲೆ ಕಂಡು ಬೆರಾಗಾಗಿ ಅವನನ್ನು ಕರೆದು ನೀನು ಆಸಾಮಾನ್ಯ ನಿನ್ನ ಮಹಿಮೆ ಅಪಾರ ನಿನ್ನಿಂದ ಲೋಕಕಲ್ಯಾಣವಾಗಬೇಕಿದೆ ಎಂದು ಹೇಳಿದರು. ಈ ಪ್ರಾಂತ್ಯಬಿಟ್ಟು ಮುಂದೆಸಾಗಿ ಕತ್ತಲರಾಜ್ಯದೆಡೆಗೆ ಬೆಳಕು ಚೆಲ್ಲಾಬೇಕಿದೆ ಎಂದು ತಿಳಿಸಿ ಮರಿದೇವನಿಗೇ ಒಂದು ಹುಲಿಯಮರಿಯನ್ನು ನೀಡಿ ಇದು ಮುಂದೆ ನಿನ್ನ ವಾಹನವಾಗುತ್ತದೆಂಬುದಾಗಿ ವಿವರಿಸಿ ಗುರಿಯದಿಕ್ಕನು ತೋರಿದರು.

ಮರಿದೇವ ಗುರುವಿನ ಮಾತಿನಂತೆ ಕತ್ತಲರಾಜ್ಯದೆಡೆಗೆ ತನ್ನ ಪ್ರಯಾಣ ಬೆಳೆಸಿದನು.

ಬಾಲಕರೂಪನಾದ ಮರಿದೇವನು ಈ ಪ್ರಾಂತ್ಯದಿಂದ ಕತ್ತಲ ರಾಜ್ಯದ (ಈಗಿನ ಕರ್ನಾಟಕ) ಕಡೆಗೆ ಬಂದರು. ಈ ಪ್ರಾಂತ್ಯದಲ್ಲಿ ವಿದ್ಯೆ ಕಲಿಯುವ ಬಯಕೆಯಿಂದ ಸುತ್ತೂರು ಶ್ರೀ ಕ್ಷೇತ್ರದ ಶಿವರಾತ್ರೀಶ್ವರರನ್ನು ಕಂಡು ವಿದ್ಯೆ ಕಲಿಸಿಕೊಡುವಂತೆ ಕೇಳಿಕೊಂಡರು. ಶಿವರಾತ್ರೀಶ್ವರರು ವಿದ್ಯೆ ಕಲಿುಯಲು  ರಾಗಿ ಬೀಸುವ ಕಾಯಕ ಮಾಡುವಂತೆ ಮರಿದೇವನಿಗೆ ಸೂಚಿಸಿದರು. ಇದಕ್ಕೆ ಒಪ್ಪಿ ಕಾಯಕ ದಲ್ಲಿ ಮುಂದುವರೆಯುತ್ತ ರಾಗಿ ಕಲ್ಲಿಗೆ ಒಂದು ವರವನ್ನು ಕೊಟ್ಟರು, ರಾಗಿ ಕಲ್ಲಿಗೆ ನಿನ್ನ ಕಾಯಕ ದಲ್ಲಿ ನೀನು ಮುಂದುವರೆ, ನಾನು ನನ್ನ ಕಾಯಕದಲ್ಲಿ ಮುಂದುವರೆಯುತ್ತೆನೆ (ಧ್ಯಾನ ಮಾಡುವ ಕಾಯಕ) ಎಂದು ತಿಳಿಸಿ ನೀನು ಮುಂದೆ ಪಲಪುಷ್ಪಾದಿಗಳಿಂದ  ಪೂಜಿಸ ಯಂದು ಆಶೀರ್ವದಿಸಿದರು. ಆಗ ರಾಗಿಕಲ್ಲು ತನ್ನಷ್ಟಕ್ಕೆ ತಾನೇ ತಿರುಗುತ್ತಾ ರಾಗಿ ಹಿಟ್ಟು (ಪುಡಿ) ಆಗುತ್ತಿತ್ತು. ಮರಿದೇವ ಧ್ಯಾನದಲ್ಲಿ ಮಗ್ನರಾಗಿದ್ದರು. ಇದನ್ನು ಕಂಡ ಶಿಷ್ಯರು ಗುರುವಿಗೆ ಇವರ ಈ ಮಾಯೆಯನ್ನು ತಿಳಿಸಿದರು. ಮರಿದೇವರ ಈ ಮಾಯೆಯ ಕಂಡ ಗುರುಗಳು ಮುಖದ ತೇಜಸ್ಸನ್ನು ಕಂಡು ನೀನು ಸಾಮಾನ್ಯನಲ್ಲ ಲೋಕಕಲ್ಯಾಣಕ್ಕೆ ಬಂದ ಮಹದೇವ ಹಾಗಾಗಿ ನಿನ್ನ ಮರಿದೇವ ನೆಂಬ ಹೆಸರು ಮರೆಯಾಗಿ ಮಹದೇವ ಎಂಬ ಹೆಸರು ಖ್ಯಾತಿ ಹೊಂದಲ್ಲಿ ನೀನು ರಾಗಿ ಬೀಸಿದ ಕಲ್ಲು ಸುತ್ತುರು ಕ್ಷೇತ್ರದಲ್ಲಿ ಮೆರವಣಿಗೆ ಹೊಂದಲ್ಲಿ ಇನ್ನು ಈ ಮಠದಲ್ಲಿ ಜಾಗವಿಲ್ಲ ಮುಂದೆ ಸಾಗಿ ಪ್ರಭುದೇವರ ಬಳಿಗೆ ಹೋಗುವಂತೆ ಆಶಿಸಿದರು.

ನಂತರ ಕುಂತುರು ಮಾರ್ಗವಾಗಿ ಬಂದು, ಪ್ರಭುದೆವರನ್ನು ಕಂಡು ವಿಧ್ಯಬ್ಯಸ ನೆಡಿ ಲೊಕ ಕಲ್ಯಣದ ಮರ್ಗ ತೊರುವನ್ತೆ ಕೆಲಿಕೊನ್ದಗ ಇವರಿಗೆ ಗುರುಕುಲದಲ್ಲಿ ವಿದ್ಯಬ್ಯಸ ಕಲಿಯಲು ಅವಕಶ ನೀಡಿ ಪ್ರತಿ ದಿನ ಶಿವಪೂಜೆ ಗೆ ಹೂ ತರುವ ಕಯಕವನ್ನು ಆದೀಶಿಶಿದರು ಅದರನ್ತೆ ಮರಿದೆವ ನಡೆದುಕೊಂಡು ಪ್ರಥಿ ದಿನ ಇತರೆ ಬಲಕರೊನ್ದಿಗೆ ಜೊತೆ ಗೂಡಿ ಗೋಲಿ ಗಜ್ಜುಗದ ಆಟವಾಡಿಕೊಂಡು ಸಂಜೆ ವೆಳೆ ಗುರುಕುಲಕ್ಕೆ ತೆರಳುವಾಗ ಪ್ರಭುದೆವರ ಶಿವ ಪೂಜೆಗೆಂದು ಕಾಡಲ್ಲಿ ಸಿಕ್ಕ ಹಾವು ಚೆಳು ಗೊದ್ದ ಗೊಸುಂಬಿಗಳನ್ನು ಹಿಡಿದು ನೀರಿನಲ್ಲಿ ಅದ್ದಿ ಗಮ ಗಮಿಸುವ ಪುಶ್ಪಗಲ್ಲನ್ನಾಗಿ ಮಾಡಿ ಪೂಜೆಗೆ ತಂದು ನೀಡುತ್ತಿದ್ದರು. ಪ್ರತಿ ದಿನ ಹೇಗೆ ಸಾಗುವಾಗ ಗುರುಗಳು ಮಹದೆವ ನೀಡುತ್ತಿದ್ದ ಹೂಗಲನ್ನು ಕಂಡು ಮೆಚುಗೆ ವ್ಯಕ್ತ ಪದಿಸುತ್ತಿದ್ದರು. ಉಳಿದ ಬಲಕರಿಗೆ ಇವರ ಮೆಚುಗೆ ಸಹಿಸದೆ ಮಹದೆವ ನಂತೆ ಹೂಗಳನ್ನು ತರುವಂತೆ ಯೋಚಿಸಿ ಮಹದೆವರನ್ನು ಹಿಮ್ಬಲಿಸಿದರು. ಆದರೆ ಮಹದೆವ ಕಾಡು ಬೆಟ್ಟದಲ್ಲಿ ಹೂಗಳನ್ನು ಕುಯದೆ, ಕಾಡಿನಲ್ಲಿ ಸಿಕ್ಕ ಹಾವು ಚೆಳು ಗೊದ್ದ ಗೊಸುಂಬಿಗಳನ್ನು ನೀರಿನಲ್ಲಿ ಅದ್ದಿ ಪುಶ್ಪಗಲ್ಲನ್ನಾಗಿ ಮಾಡುವುದನ್ನು ಕಂಡ ಬಾಲಕರು ಇವರತೆಯೆ ಮಾಡಲು ಹೊಗಿ ವಿಪಲಗೊಂಡಾಗ ಮಹದೆವ ಮಡುತ್ತಿದ್ದ ಈ ಮಾಯೆಯನ್ನು ಗುರುಗಳಿಗೆ ತಿಳಿಸಿದರು. ಆಗ ಗುರುಗಳು ಆಚಾಯ್ರ್ಯ ಗೊಂಡು ಮಹದೆವನನ್ನು ಹಿನ್ಬಲಿಸಿದಗ ಇವನು ಮಾಡುತ್ತಿದ್ದ್ ಮಾಯೆಯನ್ನು ತಿಳಿದು ನೀನು ಸಮನ್ಯ ಬಲಕನಲ್ಲ, ಧರೆಯನ್ನು ಉಧ್ದರಿಸಲು ಬಂದ ಮಹದೆವ ಹಗಗಿ ನೀನು ಬಂದ ಈ ಮಟವು ಕಲಿಯುಗದಲ್ಲಿ ಸಹ ಪ್ರಕ್ಯತಿ ಹೊನ್ದಲ್ಲಿ ಮುಂದೆ ನೀವು ಮಾಡ್ಅಬೆಕದ ಮಹಕರ್ಯ ಸಂಪುರ್ಣ್ಗೊ ಗೋಂಡಲಿ ಯೆಂದು ಆಶಿಸಿ ಕಲುಹಿಸಿದರು. 





#mmhills #malemahadeshwara